ಉಸ್ತಿಕಾಯಿ
	ಸೊಲನೇಸಿ ವಂಶದ ಪೊದೆಸಸ್ಯ. ಸುಂಡೆಕಾಯಿ ಪರ್ಯಾಯ ನಾಮ. ಕಾಯಿ ಕಹಿ. ಕೆಲವರು ಇದನ್ನು ತರಕಾರಿಯಾಗಿ ಉಪಯೋಗಿಸುತ್ತಾರೆ. ಸಸ್ಯಕ್ಕೆ ಔಷಧ ಗುಣವಿದೆ. ಆಸ್ತಮಾ, ಕ್ಷಯಗಳಿಗೆ ಆಯುರ್ವೇದೀಯ ಔಷಧಿಗಳನ್ನು ಇದರಿಂದ ತಯಾರು ಮಾಡುತ್ತಾರೆ. ಇದೊಂದು ಬಹುವಾರ್ಷಿಕ ಸಸ್ಯ. ಸುಮಾರು 5'-6' ಎತ್ತರ ಬೆಳೆಯುವುದು. ಎಳೆಯ ಕಾಂಡ ಮತ್ತು ಎಲೆಗಳ ಮೇಲೆ ನಯವಾದ ಬಿಳಿಬಣ್ಣದ ದೂಳಿರುತ್ತದೆ. ಗಿಡ ಬಲಿತಾಗ ದೂಳು ಮಾಯವಾಗುವುದು. ಕಾಂಡ ಮತ್ತು ಎಲೆಗಳ ಮೇಲೆ ಹಿಂದಕ್ಕೆ ಬಾಗಿದ ಮುಳ್ಳುಗಳಿವೆ. ಎಲೆ ರೋಮಪೂರಿತ. ಆಕಾರ ಆಯತ. ತೊಟ್ಟಿದೆ. ತುದಿಯಲ್ಲಿರುವ ಅಂತ್ಯಾರಂಭಿ ಹೂಗೊಂಚಲಿಯಲ್ಲಿ ಅನೇಕ ಹೂಗಳಿರುವುವು. ಇದನ್ನು ಬೀಜಗಳಿಂದ ವೃದ್ಧಿ ಮಾಡಬಹುದು.				         
   (ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ